ಜನತಾ ರೂರಲ್ ಹೈಸ್ಕೂಲ್, ಲಕ್ಷ್ಗ್ಮೀಪುರ (Lakshmipura)

India / Karnataka / Ramanagaram / Lakshmipura
 ಪ್ರೌಢ ಶಿಕ್ಷಣ  ವರ್ಗ ಸೇರಿಸಿ
 ಛಾಯಾಚಿತ್ರಗಳನ್ನು ಲಗತ್ತಿಸಿ

ನಾವು ಪ್ರೌಢಶಾಲೆ ವ್ಯಾಸಂಗ ಮಾಡಿದ ಶಾಲೆ ಇದು. ನಮ್ಮ ಭವಿಷ್ಯದ ಹಾದಿಯನ್ನೇ ಬದಲಿಸಿದ ಪುಣ್ಯ ದೇಗುಲ ಈ ಶಾಲೆ. ಹಳ್ಳಿಯಲ್ಲಿ ಕುರಿ ಎಮ್ಮೆ ಮೇಸುತ್ತಾ, ದನಗಾಯಿಯಾಗಿದ್ದ ನಾವು ಆ ದಿನಗಳಲ್ಲಿ ಶಾಲೆ ಎಂದಿಗೆ ಮುಗಿಯುತ್ತದೆಯೋ ಎಂದು ಕಾತುರದಿಂದ ಕಾಯುತ್ತಿದ್ದೆವು. ಬೆಲ್ ಎಷ್ಟು ಬೇಗ ಬಾರಿಸುತ್ತದೆಯೋ ಎಂದು ಮನಸ್ಸೆಲ್ಲಾ ಬೆಲ್ಲಿನ ಕಡೆಗೆ ಇರುತ್ತಿತ್ತು. ಆದರೂ ಗುರುಗಳ ಭಯದಿಂದ ಅವರು ಹೇಳುವ ಪಾಠ ಪ್ರವಚನಗಳನ್ನು ಅರ್ಥೈಸಿಕೊಳ್ಳುತ್ತಿದ್ದೆವು. ನನ್ನ ಜೊತೆ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ವಿವಿಧ ನೌಕರಿಯಲ್ಲಿದ್ದು, ತಮ್ಮ ಜೀವನವನ್ನು ರೂಪಿಸಿಕೊಂಡಿದ್ದರೆ, ಇನ್ನೂ ಅನೇಕರು ತಮ್ಮ ಬದುಕನ್ನು ಬೇಸಾಯಕ್ಕೆ ಮೀಸಲಿರಿಸಿಕೊಂಡಿದ್ದಾರೆ.

ನಾನು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಕನ್ನಡ ಪ್ರಾದ್ಯಾಪಕರಾಗಿದ್ದ ಶ್ರೀಮತಿ ಗೌರಮ್ಮ ಟೀಚರ್ ಅಂತು ನಮಗೆ ಅಚ್ಚು ಮೆಚ್ಚು. ಅವರು ಒಂದು ಅಧ್ಯಾಯವನ್ನು ಪ್ರಾರಂಭ ಮಾಡಬೇಕೆಂದರೆ ಸ್ವಾರಸ್ಯಕರವಾದ ಪೀಠಿಕೆಗಳನ್ನು ಹಾಕಿ, ಆ ಮೂಲಕ ವಿದ್ಯಾರ್ಥಿಗಳ ಗಮನವನ್ನು ಕೇಂದ್ರೀಕರಿಸುತ್ತಿದ್ದ ಅವರ ಬೋಧನೆಯ ಶೈಲಿ ಇಂದಿಗೂ ನನಗೆ ಅಚ್ಚುಮೆಚ್ಚು.

ದುರಂತವೆಂದರೆ, ಸುಮಾರು ೩೦-೪೦ ವರ್ಷಗಳಿಂದಲೂ ಮುಖ್ಯಶಿಕ್ಷಕರಾಗಿ, ನಮ್ಮ ತಂದೆ ತಾಯಿಯರಿಗೂ ಗುರುಗಳಾಗಿ, ಅತೀ ಶಿಸ್ತಿನ ಗಣಿತದ ಶಿಕ್ಷಕರಾಗಿದ್ದ, ಶ್ರೀ ಚಿಕ್ಕವೀರಯ್ಯನವರು (ಇವರು ನಮ್ಮ ಮೆಳೆಹಳ್ಳಿ ಗ್ರಾಮದವರೇ ಎಂದು ಹೇಳಲು ಹೆಮ್ಮೆಯೆನಿಸುತ್ತದೆ) ನಾವು ಎಸ್.ಎಸ್.ಎಲ್.ಸಿ. ಪೂರ್ಣಗೊಳಿಸಿ ಶಾಲೆ ಬಿಡುವಾಗ ನಮ್ಮ ಜೊತೆಯಲ್ಲಿಯೇ ಸೇವೆಯಿಂದ ನಿವೃತ್ತರಾದದ್ದು ಆ ಶಾಲೆಯ ಇತಿಹಾಸದ ಪುಟ ಸೇರಿತು.

ನಮಗೆ ಎನ್.ಜಿ.ಎನ್., ವಿ.ಬಿ.ಕೆ., ಕೆ.ಸಿ.ಎನ್., ಎಸ್.ಎಸ್.ಬಿ., ಕೆ.ಎನ್.ಕೆ., ಗೌರಮ್ಮ ಮುಂತಾದ ಉಪಾದ್ಯಾಯರುಗಳಿದ್ದರು. ಇವರು ಮಾಡಿದ ವಿದ್ಯದಾನದಿಂದ ನಾವೆಲ್ಲರೂ ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವಂತಾಗಿದೆ. ಏನೇ ಇರಲಿ ನಮ್ಮ ಎಲ್ಲಾ ಗುರುಗಳಿಗೆ ಕೋಟಿ ಕೋಟಿ ನಮನಗಳು.

ಈ ವಿಚಾರವನ್ನು ಅಂತರ್ಜಾಲಕ್ಕೆ ಸೇರ್ಪಡೆ ಮಾಡಿದವರು;
ಎಂ.ಎಸ್. ರಮೇಶ,
(ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಸ್ಟೆನೋ)
ಮೆಳೆಹಳ್ಳಿ,
ರಾಮನಗರ ತಾ/ಜಿಲ್ಲೆ.
ದೂ. 9916964076
Nearby cities:
ಕಕ್ಷೆಗಳು:   12°50'13"N   77°17'43"E

ಪ್ರತಿಕ್ರಿಯೆಗಳು

  • ನಮಗೆ ವಿದ್ಯೆಯನ್ನು ಧಾರೆಯೆರೆದ ನಮ್ಮ ಗುರುಗಳಿಗೆ ಕೋಟಿ ಕೋಟಿ ನಮನಗಳು.
  • I really very great full to teachers. thank you so much Pavithra C.N. (Chikkasulikere)
This article was last modified 9 ವರ್ಶಗಳ ಹಿಂದೆ