ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ
India /
Maharashtra /
Mumbai /
World
/ India
/ Maharashtra
/ Mumbai
/ ಭಾರತ / ಮಹಾರಾಷ್ಟ್ರ / ಮುಂಬೈ
ಸೇತುವೆ
ವರ್ಗ ಸೇರಿಸಿ
ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ಒಂದು 8-ಪಥದ, ಸರಪಣಿ ಆಧರಿತ ಸೇತುವೆಯಾಗಿದ್ದು ಒತ್ತಡ-ನಿರ್ಮಿತ ಸಿದ್ಧ ಗಾರೆಯಿಂದ ಕೂಡಿದ ಎತ್ತರದ ಕಮಾನುಗಳನ್ನು ಹೊಂದಿದ್ದು, ಬಾಂದ್ರಾ ಹಾಗೂ ಮುಂಬಯಿಯ ಪಶ್ಚಿಮ ಉಪನಗರಗಳನ್ನು ವರ್ಲಿ ಮತ್ತು ಮಧ್ಯ ಮುಂಬಯಿಯೊಂದಿಗೆ ಸಂಪರ್ಕಿಸುತ್ತದೆ. ಇದು ಉದ್ದೇಶಿತ 'ಪಶ್ಚಿಮ ದ್ವೀಪ ಮುಕ್ತ ಮಾರ್ಗ ವ್ಯವಸ್ಥೆ'ಯ ಪ್ರಥಮ ಹಂತವಾಗಿದೆ. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ಸಂಸ್ಥೆ (MSRDC)ಯ ರೂ. 1600 ಕೋಟಿ (ಸುಮಾರು $ 400 ಮಿಲಿಯನ್) ವೆಚ್ಚದ ಈ ಯೋಜನೆಯನ್ನು ಹಿಂದೂಸ್ಥಾನ್ ಕನ್ಸ್‌ಟ್ರಕ್ಷನ್ ಕಂಪೆನಿ ಕಾರ್ಯಗತಗೊಳಿಸುತ್ತಿದೆ. ವಿನ್ಯಾಸ ಮತ್ತು ಯೋಜನೆಯ ನಿರ್ವಹಣೆಯನ್ನು ಮೆಸರ್ಸ್ DAR ಕನ್ಸಲ್ಟೆಂಟ್ಸ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಂದ 30 ಜೂನ್ 2009 (ಮುಂದೂಡಿದ್ದರಿಂದ ವಾಸ್ತವವಾಗಿ 1 ಜುಲೈ 2009) ರಂದು ಸೇತುವೆಯ ಉದ್ಘಾಟನೆಯಾಯಿತು. ಈ ಸಮುದ್ರ ಸಂಪರ್ಕವು ಬಾಂದ್ರಾ ಮತ್ತು ವರ್ಲಿ ನಡುವಿನ ಪ್ರಯಾಣವನ್ನು ಕ್ಷಿಪ್ರಗೊಳಿಸಿ, 45-60 ನಿಮಿಷಗಳ ಪ್ರಯಾಣವನ್ನು 15 ನಿಮಿಷಗಳಿಗೆ ಇಳಿಸಲಿದೆ.
ವಿಕಿಪಿಡಿಯಾ ಬರಹ: http://kn.wikipedia.org/wiki/ಬಾಂದ್ರಾ-ವರ್ಲಿ_ಸಮುದ್ರ_ಸಂಪರ್ಕ
Nearby cities:
ಕಕ್ಷೆಗಳು: 19°1'40"N 72°49'3"E