Paduvani Village

India / Karnataka / Kumta /
 Upload a photo

ಪಡುವಣಿ
ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಪುಟ್ಟ ಹಳ್ಳಿ ಪಡುವಣಿ. ಸುಮಾರು ನೂರೈವತ್ತು ಮನೆಗಳು ಈ ಪುಟ್ಟ ಹಳ್ಳಿಯಲ್ಲಿವೆ. ವ್ಯವಸಾಯ ಇಲ್ಲಿನ ಜನರ ಮುಖ್ಯ ಕಸುಬು. ಮೀನುಗಾರ ಕುಟುಂಬಗಳು ಈ ಹಳ್ಳಿಯಲ್ಲಿ ಸಾಕಷ್ಟಿವೆ. ಗಾಮೊಕ್ಕಲು, ನಾಡವ, ಹರಿಕಂತ್ರ, ನಾಮದಾರಿ ಜಾತಿಗೆ ಸೇರಿದವರು ದಾಲ್ಜಿ ಮುಸಲ್ಮಾನರು ಈ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ದಾಲ್ಜಿ ಮುಸಲ್ಮಾನರು ಮತ್ತು ಹರಕಂತ್ರ ಜಾತಿಯವರು ಮೀನುಗಾರಿಕೆಯನ್ನು ಮುಖ್ಯ ಕಸುಬಾಗಿ ಸ್ವೀಕರಿಸಿದ್ದಾರೆ. ಪ್ರತಿ ಮೀನುಗಾರ ಕುಟುಂಬವೂ ಮೀನುಗಾರರಲ್ಲದ ೊಂದು ಕುಟುಂಬಕ್ಕೆ ನಿಯಮಿತವಾಗಿ ಮೀನು ನೀಡಿ ವರ್ಷಕ್ಕೊಮ್ಮೆ ಅಕ್ಕಿ ಯನ್ನು ಪಡೆದುಕೊಂಡು ಹೋಗುವ `ಎಚ್ಚದ ಮನೆ' ಪರಿಕಲ್ಪನೆ ಈ ವರೆಗೂ ಇಲ್ಲಿ ನಡೆದುಕೊಂಡು ಬಂದಿದೆ. ಖ್ಯಾತ ಯಕ್ಷಗಾನ ಕಲಾವಿದರಾದ ಪರಮಯ್ಯ ಪಟಗಾರ, ನಾರಾಯಣ ಗಾಂವಕಾರ ಇದೇ ಊರಿನವರು. ಪಡುವಣಿಯ ಶಾಂತಿಕಾ ಪರಮೇಶ್ವರಿ ದೇಚಸ್ಥಾನ ತನ್ನ ವಿಶಿಷ್ಟ ಬಂಡಿಹಬ್ಬಕ್ಕಾಗಿ ಪ್ರಸಿದ್ಧವಾಗಿದೆ.
Nearby cities:
Coordinates:   14°30'16"N   74°24'5"E
This article was last modified 10 years ago