ಲೆಪಾಕ್ಷೀ
India /
Andhra Pradesh /
Hindupur /
World
/ India
/ Andhra Pradesh
/ Hindupur
/ ಭಾರತ / ಆಂಧ್ರ ಪ್ರದೇಶ /
ಪಟ್ಟಣ, ಐತಿಹಾಸಿಕ, mandal headquarter (en)
ಲೇಪಾಕ್ಷಿ: ಆಂಧ್ರಪ್ರದೇಶ ರಾಜ್ಯದ ಅನಂತಪುರಜಿಲ್ಲೆಯ ಒಂದು ಚಾರಿತ್ರಿಕ ಪಟ್ಟಣ. ಬೆಂಗಳೂರಿನಿಂದ 116 ಕಿ.ಮೀ ದೂರದಲ್ಲಿದೆ.
ಇತಿಹಾಸ: ವಿಜಯನಗರ ಅರಸರ ಆಳ್ವಿಕೆಯ ಸಮಯದಲ್ಲಿ ಈ ದೇವಸ್ಥಾನವನ್ನು ಕಟ್ಟಲಾಗಿದೆ. ಕೃಷ್ಣದೇವರಾಯನ ತಮ್ಮ ಅಚ್ಚುತರಾಯನ ಕಾಲದಲ್ಲಿ ಪೆನುಗೊಂಡ ಪ್ರದೇಶಕ್ಕೆ ಕೋಶಾಧಿಕಾರಿಯಾಗಿದ್ದ ವಿರೂಪಣ್ಣ ಈ ದೇವಸ್ಥಾನ ಕಟ್ಟಿಸಿದರು ಎನ್ನುವ ಮಾಹಿತಿ ಇದೆ. ರಾಮಾಯಣದ ಕಾಲದಲ್ಲಿ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಜಟಾಯು ಪಕ್ಷಿ ರಾವಣನನ್ನು ತಡೆಯಿತಂತೆ. ರಾವಣ ಕೋಪಗೊಂಡು ಪಕ್ಷಿಯ ರೆಕ್ಕೆಗಳನ್ನೆ ಕತ್ತರಿಸಿದನಂತೆ. ಕೆಳಗೆ ಬಿದ್ದ ಪಕ್ಷಿ ರಾಮ ಆ ಮಾರ್ಗವಾಗಿ ಬರುವುದನ್ನು ಕಾದು ರಾವಣ ಸೀತಾಮಾತೆಯನ್ನು ಕದ್ದೊಯ್ದದ್ದನ್ನು ತಿಳಿಸಿತಂತೆ. ರಾಮನು ಅದನ್ನು ಲೇ ಪಕ್ಷಿ ಎಂದು ಕರೆದು ಅದು ಲಯದಲ್ಲಿ ಲೀನ ವಾಗುವಂತೆ ಮಾಡಿದನಂತೆ. "ಲೇ ಪಕ್ಷಿ" ಎಂದದ್ದೆ, ಆ ಸ್ಥಳಕ್ಕೆ 'ಲೇಪಾಕ್ಷಿ' ಎಂಬ ಹೆಸರು ಬರಲು ಕಾರಣವಾಯಿತು.
ದೇವಾಲಯ ವಿನ್ಯಾಸ: ದೇವಸ್ಥಾನವು ೭ ಪ್ರಾಕಾರಗಳಷ್ಟು ವಿಸ್ತಾರ ವಾಗಿದ್ದು ಈಗ ಮೂರು ಪ್ರಾಕಾರಗಳು ಮಾತ್ರ ಉಳಿದಿದೆ. ಉಳಿದದ್ದು ಊರು ಬೆಳೆದಂತೆ ಊರ ಒಳಗೆ ಸೇರಿಹೋಗಿದೆ. ಈ ದೇವಸ್ಥಾನ ಕೂರ್ಮಶೈಲವೆಂಬ ಆಮೆಯ ಆಕಾರದ ಬೆಟ್ಟದ ಮೇಲೆ ಕಟ್ಟಲಾಗಿದೆ. ಬದಿಯಿಂದ ಕಲ್ಲುಗಳನ್ನು ಜೋಡಿಸಿದ್ದಾರೇ ವಿನಃ ಅದಕ್ಕಾಗಿ ತಳಪಾಯ ವಾಗಲಿ ಅಥವಾ ಆಧಾರವಾಗಲಿ ಕಂಡುಬರುವುದಿಲ್ಲ.

Nearby cities:
ಕಕ್ಷೆಗಳು: 13°48'14"N 77°36'12"E